ಪರೀಕ್ಷೆಗಳು ಹತ್ತಿರ ಬಂದ ಹಾಗೆ, ವಿದ್ಯಾರ್ಥಿಗಳಿಗಾಗಿ
ಏಕಾಗ್ರತೆ, ಓದಿನ ಬಗ್ಗೆ ಇತ್ಯಾದಿ ವಿಶೇಷ ಲೇಖನಗಳು ಮೂಡಿ ಬರುವುದು ಸಹಜ. ಆ ಎಲ್ಲ ಲೇಖನಗಳು
ಶೈಕ್ಷಣಿಕ ವರ್ಷದ ಆರಂಭದಲ್ಲೋ ಅಥವಾ ಪರೀಕ್ಷೆಗೆ ಸಾಕಷ್ಟು ಸಮಯವಿರುವಾಗ ಬಂದರೆ
ಸಾರ್ಥಕವಾಗುವುದು.
ಇತ್ತೀಚಿಗೆ Coursera ದಲ್ಲಿ “Learning How To Learn” ಕೋರ್ಸ್ ಮಾಡಿದ್ದೆ. ಅಲ್ಲಿ ನಾನು ಕಲಿತದ್ದು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಯಾವುದೇ ಹೊಸದನ್ನು ಕಲಿಯುವವರಿಗೆ ಅತ್ಯಂತ ಸಹಾಯಕರಿಯಾಗಬಲ್ಲುದು.
ಈ ಮೇಲಿನ ಎರಡು ಕಾರಣಗಳಿಂದ ಈ ಲೇಖನ.
ಓದುವುದು ಹೇಗೆ?
ಇದನ್ನು
ತಿಳಿಯುವುದಕ್ಕಿಂತ ಮೊದಲು, ಮೆದುಳಿನ ಸರಳ ಸ್ಮರಣ ಶಕ್ತಿ ಸಂರಚನೆಯನ್ನು ತಿಳಿಯುವುದು ಒಳಿತು.
ಮೆದುಳಿನ ಸ್ಮರಣ ಶಕ್ತಿಯನ್ನು ಎರಡು ಭಾಗಗಳಾಗಿ
ವಿಂಗಡಿಸಬಹುದು:
- ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗ
- ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗ
ಯಾವುದಾದರು ಹೊಸದೊಂದನ್ನು ಕಲಿಯುವಾಗ, ಅದು ಮೊದಲು
ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗದಲ್ಲಿ ಸಂಗ್ರಹವಾಗುತ್ತದೆ. ಈ ಭಾಗವು ಸಾಮಾನ್ಯವಾಗಿ ಸುಮಾರು
ಬೆರಳನಿಕೆಯಷ್ಟು ಸಂಗತಿಗಳನ್ನು ಮಾತ್ರ ಹಿಡಿದಿಟ್ಟುಕೊಳ್ಳಬಹುದು. ಹಾಗಾಗಿ ಇದರ ವಿಸ್ತಾರ ತುಂಬಾ
ಕಡಿಮೆ. ಇದರ ಪರಿಣಾಮಕಾರಿ ಉಪಯೋಗಕ್ಕಾಗಿ ಇದನ್ನು ಖಾಲಿಗೊಳಿಸುತ್ತಿರಬೇಕು. ಅದಕ್ಕೆ ಇಲ್ಲಿರುವ
ಮಾಹಿತಿಯನ್ನು ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ವರ್ಗಾಯಿಸುವುದು. ಈ ಭಾಗವು ಅತ್ಯಂತ
ವಿಶಾಲವಾಗಿದ್ದು, ಹೆಚ್ಚಿನ ಮಾಹಿತಿಯನ್ನು ದೀರ್ಘ ಸಮಯದವರೆಗೆ ಹಿಡಿದಿಟ್ಟುಕೊಳ್ಳಬಹುದು.
ಹಾಗಾದರೆ ಅಲ್ಪ ಕಾಲಿಕ ಸ್ಮರಣ ಶಕ್ತಿ ಭಾಗದಿಂದ ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ಹೇಗೆ
ವರ್ಗಾಯಿಸುವುದು ?
ಪುನರಾವರ್ತನೆ
ಇವತ್ತು ಓದಿರುವದನ್ನು ಇವತ್ತೇ ನಾಲ್ಕು ಸಲ ಓದುವುದು
ಪುನರಾವರ್ತನೆ ಅನ್ನಿಸುವುದಿಲ್ಲ. ಓದಿರುವ ವಿಷಯವನ್ನು ನಿರ್ದಿಷ್ಟ ಅವಧಿಯ ಅಂತರದಲ್ಲಿ
ಪುನರಾವರ್ತಿಸುವುದು.
ಉದಾ:
ಈ ಕ್ರಮದಿಂದ ಮಾಡುವ ಕಾರ್ಯದಲ್ಲಿ ಅತ್ಯಂತ ಏಕಾಗ್ರತೆ ಮೂಡುವುದು ಹಾಗೂ ಚಿಕ್ಕ ಚಿಕ್ಕ ಸಾಧನೆಗಳ ಆಭಾಸವಾಗುವುದು. ಇದು ಮಾಡುವ ಕಾರ್ಯದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದು.
ಈ ರೀತಿ,
ವಿಷಯವನ್ನು ದೀರ್ಘ ಕಾಲಿಕ ಭಾಗಕ್ಕೆ ವರ್ಗಾಯಿಸಬಹುದು.
ಈಗ ಪುನರಾವರ್ತನೆ ಮಾಡುವುದು ಹೇಗೆ ?
ಅನೇಕರು ಓದಿದ ವಿಷಯವನ್ನು ಮತ್ತೆ ಪುಸ್ತಕ ತೆಗೆದು
ಓದುತ್ತಾರೆ. ಇನ್ನು ಕೆಲವರು underline ಮಾಡಿದರೆ ಅದು ಮೆದುಳಿನಲ್ಲಿ ಅಚ್ಚಾಗುತ್ತೆ ಎಂದು
ತಿಳಿಯುತ್ತಾರೆ. ಇವುಗಳೆಲ್ಲ ಪುನರಾವರ್ತನೆಯ ಪರಿಣಾಮಕಾರಿ ಪದ್ದತಿಗಳಲ್ಲ !
Recall ಅಥವಾ ನೆನಪು ಮಾಡಿಕೊಳ್ಳುವುದು
ಪುನರಾವರ್ತನೆಯ ಪರಿಣಾಮಕಾರಿ ಪದ್ದತಿ. ಇದನ್ನು ಪುಸ್ತಕ ನೋಡದೆ ಮಾಡಬೇಕು. ಅದಲ್ಲದೆ ಗೆಳೆಯರೊಡನೆ
ಆ ವಿಷಯದ ಮೇಲೆ ಚರ್ಚೆ ಪರಿಣಾಮಕಾರಿ. ಮುನ್ನೆಚ್ಚರಿಕೆ: ನಿಮ್ಮ ಗೆಳೆಯರು ಆ ವಿಷಯವನ್ನು ಓದಿ
ಕೊಂಡಿರಬೇಕು. ಇಲ್ಲವಾದರೆ ಚರ್ಚೆ ಹರಟೆಯಾಗುವ ಸಾಧ್ಯತೆ ಜಾಸ್ತಿ.
ಈ ರೀತಿ ನಮಗೆ, ಯಾವ ವಿಷಯಗಳು ತಿಳಿದಿವೆ, ಇನ್ನು
ಸರಿಯಾಗಿ ತಿಳಿಯಬೇಕಾಗಿದೆ ಎಂಬುದು ಸ್ಪಷ್ಟವಾಗುವುದು.
Recall ಮಾಡುವಾಗ,
ಮೆದುಳಿನ ಮೇಲಿನ ಸೂಕ್ಷ್ಮ ಒತ್ತಡ, ಅಲ್ಪ ಕಾಲಿಕ
ಸ್ಮರಣ ಶಕ್ತಿ ಭಾಗದಿಂದ ದೀರ್ಘ ಕಾಲಿಕ ಸ್ಮರಣ ಶಕ್ತಿ ಭಾಗಕ್ಕೆ ವರ್ಗಾವಣೆ ಸಂಕೇತ.
ಇನ್ನು ಮೊದಲು
ಕೇಳಿದಂತೆ ಓದುವುದು ಹೇಗೆ?
ಅನೇಕರು ಒಂದೇ ವಿಷಯವನ್ನು ಒಂದೆರಡು ಗಂಟೆ ಸತತವಾಗಿ
ಓದುತ್ತಾರೆ. ಆದರೆ ಇದು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ.
ಪೊಮೊಡೋರೋ(Pomodoro)
ಪದ್ದತಿ
ಈ ಪದ್ದತಿಯನ್ನು Francesco Cirillo 1980ರ
ದಶಕದಲ್ಲಿ ಅಭಿವೃದ್ಧಿಪಡಿಸಿದನು. ಈ ಪದ್ದತ್ತಿ, ಸಮಯ ನಿರ್ವಹಣೆ ಹಾಗೂ ಕಲಿಕೆಗಾಗಿ ಅತ್ಯಂತ
ಸಹಾಯಕಾರಿ.
ಇದನ್ನು ಅನುಸರಿಸುವ
ಕ್ರಮಗಳು:
1.
ಓದುವ ವಿಷಯವನ್ನು
ನಿರ್ಧರಿಸಿ.
2.
ಯಾವುದೇ ಬಾಹ್ಯ
ಗೊಂದಲಗಳಿಲ್ಲದೆ, ನಿರಂತರವಾಗಿ 25 ನಿಮಿಷ ಆ ವಿಷಯವನ್ನು ಓದಿ.
3.
ನಂತರ 3-5 ನಿಮಿಷ
ಅಲ್ಪ ವಿರಾಮ.
4.
ಮತ್ತೆ 25 ನಿಮಿಷ
ಓದು.
5.
ಹೀಗೆ ಮೇಲಿನ
ಕ್ರಮಗಳನ್ನು ನಾಲ್ಕು ಬಾರಿ ಅನುಸರಿಸುವುದು.
6.
ನಂತರ ಒಂದು ದೀರ್ಘ
ವಿರಾಮ (15-30 ನಿಮಿಷ).
7.
ಬೇರೊಂದು
ವಿಷಯವನ್ನು ಆಯ್ದುಕೊಂಡು ಮೇಲಿನ ಹಂತಗಳ ಪುನರಾವರ್ತನೆ.ಈ ಕ್ರಮದಿಂದ ಮಾಡುವ ಕಾರ್ಯದಲ್ಲಿ ಅತ್ಯಂತ ಏಕಾಗ್ರತೆ ಮೂಡುವುದು ಹಾಗೂ ಚಿಕ್ಕ ಚಿಕ್ಕ ಸಾಧನೆಗಳ ಆಭಾಸವಾಗುವುದು. ಇದು ಮಾಡುವ ಕಾರ್ಯದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದು.
ಈ ಮೇಲೆ ತಿಳಿಸಿದ ಪದ್ದತಿಗಳ ಜೊತೆಗೆ ನಿತ್ಯ
ವ್ಯಾಯಾಮ, ಪ್ರಾಣಾಯಾಮ (ಪ್ರಮುಖವಾಗಿ ಅನುಲೋಮ ವಿಲೋಮ) ಪರಿಣಾಮಕಾರಿ ಕಲಿಕೆಗೆ ಸಹಾಯಕಾರಿ.
ಪರಿಣಾಮಕಾರಿ ಕಲಿಕೆಯ ಹತ್ತು ಸೂತ್ರಗಳು
ಪರಿಣಾಮಕಾರಿ ಕಲಿಕೆಯ ಹತ್ತು ಸೂತ್ರಗಳು
- Recall ಅಥವಾ ಕಲಿತದ್ದನ್ನು ನೆನಪು ಮಾಡಿಕೊಳ್ಳುವುದು. ಇದು ನೀವು ವಾಯು ವಿಹಾರಕ್ಕೆ ಹೋದಾಗ ಅಥವಾ ಬಸ್ಸಲ್ಲಿ ಪ್ರಯಾಣಿಸುವಾಗಲೂ ಆಗಿರಬಹುದು.
- ನಿಮ್ಮ ಕಲಿಕೆಯನ್ನು ಟೆಸ್ಟ್ ಗಳ ಮೂಲಕ ಪರೀಕ್ಷಿಸಿಕೊಳ್ಳಿ.
- ಓದಿರುವ ವಿಷಯದ ಸತತ ಅಭ್ಯಾಸದಿಂದ ಅದರ ಎಲ್ಲ ಪ್ರಮುಖ ಅಂಶಗಳು ಥಟ್ಟನೆ ನೆನಪಾಗಿಸುವುದು (Chunking).
- ಓದಿರುವ ವಿಷಯವನ್ನು ನಿರ್ದಿಷ್ಟ ಅವಧಿಯ ಅಂತರದಲ್ಲಿ ಪುನರಾವರ್ತಿಸುವುದು.
- ನಿರ್ದಿಷ್ಟ ಸಮಸ್ಯೆಯ ಬೇರೆ ಬೇರೆ ರೀತಿಯ ಪರಿಹಾರಗಳನ್ನು ವಿಶ್ಲೇಷಿಸುವುದು.
- ಓದಿನ ನಡುವೆ ಅಲ್ಪ ವಿರಾಮ ತೆಗೆದುಕೊಳ್ಳುವುದು.
- ಕಠಿಣ ಅನ್ನಿಸುವ ವಿಷಯಗಳನ್ನು ಸಾಮಾನ್ಯ ಸಂಗತಿಗಳ ಜೊತೆ ಹೋಲಿಸುವುದು (analogy). ಈ ವಿಷಯವನ್ನು ಒಂದು ಹತ್ತು ವರ್ಷದ ಮಗುವಿಗೆ ತಿಳಿಸಬೇಕಾದ್ರೆ ಹೇಗೆ ಹೇಳುತ್ತಿದೆ? ಎಂಬ ಯೋಚನೆಯಿಂದ ವಿಷಯವನ್ನು ಸರಳ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವುದು.
- ಬಾಹ್ಯ ಗೊಂದಲಗಳನ್ನು (ಮೊಬೈಲ್, ಇಂಟರ್ನೆಟ್, ಟಿವಿ ಇತ್ಯಾದಿ) ಆರಿಸಿ, 25 ನಿಮಿಷ ಅತ್ಯಂತ ಏಕಾಗ್ರತೆಯ ಓದು.
- ಕಠಿಣ ಎನಿಸುವ ವಿಷಯಗಳನ್ನು ಬೆಳಗಿನ ಸಮಯ ಓದುವುದು.
- ಆಗಾಗ ನಿಮ್ಮ ಗುರಿಯನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವುದು. ಇದು ನಿಮಗೆ ಹೊಸ ಉತ್ಸಾಹ ಹಾಗೂ ವಿಶ್ವಾಸ ತುಂಬುವುದು.
ಕಲಿಕೆಯ ಇನ್ನಷ್ಟ್ಟು ವಿಧಾನಗಳು ಹಾಗೂ ಅವುಗಳ ಹಿಂದಿನ ವೈಜ್ನ್ಯಾನಿಕ ಕಾರಣಗಳಿಗಾಗಿ Coursera ಕೋರ್ಸ್ ನೋಡುವುದು.
ಆಕರ
Learning How to Learn : powerful mental tools to help you master tough subjects
University of California, San Diego
https://www.coursera.org/learn /learning-how-to-learn/
ಆಕರ
Learning How to Learn : powerful mental tools to help you master tough subjects
University of California, San Diego
https://www.coursera.org/learn
Simply Awesome. Keep posting such articles are very helpful and encourage our students to bring there harwork to right direction.
ಪ್ರತ್ಯುತ್ತರಅಳಿಸಿSimply Awesome. Keep posting such articles are very helpful and encourage our students to bring there harwork to right direction.
ಪ್ರತ್ಯುತ್ತರಅಳಿಸಿSure Farookh... :) In fact, after taking the said course in Coursera, I got to know about many of my mistakes in learning methods. Very helpful course!
ಅಳಿಸಿಸುಪರ್
ಪ್ರತ್ಯುತ್ತರಅಳಿಸಿ