ಕನ್ನಡ ಉಳಿಸಿ ಬೆಳೆಸಲು ನಾನು ಮಾಡಬಹುದಾದ ಮೂರು ಕೆಲಸಗಳು:
ಕನ್ನಡ
ಭಾಷೆ ಕೇವಲ ಮಾತುಕತೆಯ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ತಳಹದಿ.
ಪ್ರತಿಯೊಂದು ಭಾಷೆ ತನ್ನ ಜೊತೆ ತನ್ನ ಜನ್ಮ ಸ್ಥಳದ ಸಂಸ್ಕೃತಿ, ಆಚಾರ, ಹಾಗೂ
ವಿಚಾರಗಳನ್ನು ಬಳುವಳಿಯಾಗಿ ಹೊತ್ತು ತರುತ್ತದೆ.
ಇದಕ್ಕೆ ಇಂಗ್ಲಿಷ್, ಹಿಂದಿ, ಅಥವಾ ಮತ್ತ್ಯಾವುದೇ ಭಾಷೆ ಹೊರತಾಗಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ ಗೊಂದಲಮಯ ರೋಬೋಟ್ಗಳ ಬದಲಾಗಿ ಸುಸಂಸ್ಕ್ರತ ನಾಗರಿಕರ ನಿರ್ಮಾಣ ಸಾಧ್ಯವಾದೀತು. ಇಲ್ಲಿ "ಗೊಂದಲಮಯ ರೋಬೋಟ್" ಯಾಕಂದ್ರೆ ಇವ್ರು ಬೆಳೆಯುವುದು ಕನ್ನಡ ವಾತಾವರಣದಲ್ಲಿ ಆದರೆ ತಲೆಯಲೆಲ್ಲಾ ಬೇರೆ ಭಾಷೆ, ಸಂಸ್ಕೃತಿ !
೨. ಕೆಲವಂದು ಅನಿವಾರ್ಯ ಸಂಧರ್ಭಗಳನ್ನು ಹೊರತುಪಡಿಸಿ, ಎಲ್ಲ ಕಡೆ ಕನ್ನಡ ಬಳಕೆ
ನಮ್ಮ
ಭಾಷೆಯನ್ನು ಉಳಿಸಿ ಬೆಳೆಸಲು, ಮೊದಲನೆಯದಾಗಿ ಕನ್ನಡದಲ್ಲಿ ಹೆಮ್ಮೆಯಿಂದ ಮಾತಾಡುವುದನ್ನು
ಕಲಿಯಬೇಕು. ಇದಕ್ಕೆ ನಮ್ಮ ಸಂಸ್ಕೃತಿ, ಪರಂಪರೆಯ ಜ್ನ್ಯಾನ ಹಾಗು ಸ್ವಲ್ಪ ಧೈರ್ಯ, ತಾಳ್ಮೆ ಅಗತ್ಯ. ನಮ್ಮ ಗೌರವಯುತ ಪರಂಪರೆಯ ಅರಿವು ನಮ್ಮಲಿ ಹೆಮ್ಮೆ
ಮೂಡಿಸುವುದು. ಈ ಕೆಲಸ ನಮ್ಮ ಪಠ್ಯ, ಸಮಾಜದ ಹಿರಿಯರು, ಸಮೂಹ ಮಾಧ್ಯಮಗಳು ವ್ಯವಸ್ಥಿತ
ರೀತಿಯಲ್ಲಿ ಮಾಡಿದರೆ ಸಾಧ್ಯವಾದೀತು. ಕನಿಕರ ಕನ್ನಡತನ ನಿಲ್ಲಬೇಕು! ಕನ್ನಡ ನಾಡಿನಲ್ಲಿ
ನೆಲೆಸಿದವರು ಕನ್ನಡವನ್ನು ಕಲಿತು ಮಾತನಾಡಲು ಪ್ರಯತ್ನಿಸಬೇಕು. ಕೆಲವೊಂದು
ಸನ್ನಿವೇಶಗಳನ್ನು ಹೊರತುಪಡಿಸಿ, ಕನಿಕರದಿಂದ ಪರ ಭಾಷಿಕರ ಜೊತೆ ಅವರದೇ ಭಾಷೆಯಲ್ಲಿ
ಮಾತಾಡುವುದನ್ನು ನಿಲ್ಲಿಸಬೇಕು.
೩. ಅಂತರ್ಜಾಲದಲ್ಲಿ ಕನ್ನಡ ಪ್ರಚಾರ ಹಾಗೂ ಪ್ರಸಾರ
ಕನ್ನಡದಲ್ಲಿ ಶಬ್ದ ಸಂಗ್ರಹಕ್ಕೆ ಯಾವುದೇ ಕೊರತೆ ಇಲ್ಲ. ಶಿವರಾಂ ಕಾರಂತರ ಹಲವು ಆವೃತ್ತಿಯ "ವಿಜ್ಞಾನ ಪ್ರಪಂಚ " ಎಷ್ಟು ಜನರಿಗೆ ಗೊತ್ತು? ವಿಜ್ಞಾನದ ಪ್ರತಿಯೊಬ್ಬ ವಿದ್ಯಾರ್ಥಿ ಓದಲೇ ಬೇಕಾದ ಜ್ಞಾನದ ಕಣಜಗಳು. ಕನ್ನಡದಲ್ಲಿ ಹಲವು ವೈಜ್ಞಾನಿಕ ಪದಗಳು ಆ ಗ್ರಂಥಗಳಲ್ಲಿವೆ. ಆದರೂ ಬದಲಾದ ಸನ್ನಿವೇಶಕ್ಕೆ, ಹೊಸ ಪದಗಳ ಜೋಡಣೆ ಆಗಬೇಕು. ಇವತ್ತು ಯಾವುದೇ ಒಂದು ಪದಕ್ಕೆ ಕನ್ನಡ ಸಮಾನಾರ್ಥಕ್ಕೆ ಯಾರನ್ನು ಸಂಪರ್ಕಿಸುವುದು? ಅಧಿಕೃತ ಕನ್ನಡ ರತ್ನ ಕೋಶದ ಆನ್ಲೈನ್ ಆವೃತ್ತಿ ರಚಿಸಬೇಕು. ಕನ್ನಡ ಪದಗಳ ಅಧಿಕೃತ ಕೇಂದ್ರೀಕೃತ ಉಲ್ಲೇಖ ವಿಭಾಗ ರಚನೆಯಾಗಬೇಕು. ಹೊಸ ಪದಗಳ ಬಗ್ಗೆ ಚರ್ಚೆ, ವಾದ, ಸಂವಾದಗಳಾಗಬೇಕು. ಸಮೂಹ ಮಾಧ್ಯಮಗಳಲ್ಲಿ ಹೊಸ ಪದ ಜೋಡಣೆಯ ಘೋಷಣೆಯಾಗಬೇಕು.
ಕನ್ನಡ ವಿಕಿಪೀಡಿಯದಲ್ಲಿ ನಮ್ಮಮ್ಮ ಪ್ರದೇಶ, ಜನ, ಹಬ್ಬ ಇತ್ಯಾದಿಗಳ ಬಗ್ಗೆ ಬರೆಯುವುದು. ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸದ ಬಗ್ಗೆ ತಿಳಿವು ಹಾಗೂ ಹೆಮ್ಮೆ ಇದ್ದಾಗ ಮಾತ್ರ ಕನ್ನಡ ರಾಜ್ಯೋತ್ಸವ ಸಾರ್ಥಕವಾದಿತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ